
ಮಧುರ ಪ್ರೇಮ
ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ
ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ
ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ
ಪ್ರತಿ ಮಾತು ಸಿಹಿಯಾದ ಸಾಲೆ
ಪ್ರತಿ ಮುತ್ತು ಜೇನ್ಬೆರೆತ ಹಾಲೆ
ಹೃದಯದ ಮಿಡಿತವೆ ಪ್ರೀತಿಯ ಓಲೆ
ಅದ ಒದುತ್ತಿದೆ ಹೃದಯದ ಮೂಲೆಮೂಲೆ
ನಿಮಿಷನಿಮಿಷವು ಓಡುವ ಕಾಲೆ
ಹರುಷಹರುಷ ಆಡಿಸುತ್ತಿದೆ ಕೋಲು ಕೋಲಣ್ಣ ಕೋಲೆ
ಒಬ್ಬರಿಗಾಗಿ ಒಬ್ಬರು ಸೋಲೆ
ಗೆಲುವು ಅವರವರ ಪಾಲೆ
ಜಗವ ಮರೆಯುವ ಬಾರೆ ಗುಣಶೀಲೆ
ಆಡುತ ಒಲವಿನುಯ್ಯಾಲೆ
ಒಂದಾಗುವ ಬಳಿ ಬಾರೆ ಲೋಲೆ
ಹಾಡುತ ಸುವ್ವಿ ಸುವ್ವಾಲೆ
ಅನುಮಾನಿಸಿದರೆ ಸುಮ್ಮನೆ ತಲೆ ಶೂಲೆ
ಅನುಮಾನ ಬೇಡ, ನಮ್ಮದೆರಡು ದೇಹವಾದರು ಒಂದೇ ಸೂಲೇ
ನಮ್ಮ ನಂಟು ಕೀಳಲಾಗದ ನೂಲೆ
ಬಾ ತೊಡಿಸುವೆ ನಿನಗೆ ತಾಳಿ ಹೂಮಾಲೆ
ನವಜೀವನದ ಸವಿಯ ಸವಿಯೋಣ ಆಮೇಲೆ ಚಿಮ್ಮಲು ಬಯಕೆಗಳು ಮೇಲೆ ಮೇಲೆ